📋 ನೋಂದಣಿ: 1066/98-99 436/2025-26 | 1960ರ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
ಕೆಎಸ್‌ಆರ್‌ಡಿಪಿಆರ್‌ಡಿಒಇಎ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಸಂಘ (ರಿ.)

ಅಧಿಕಾರಿಗಳು ಮತ್ತು ನೌಕರರ ಕಲ್ಯಾಣ, ತರಬೇತಿ, ಸೇವಾ ಮಾಹಿತಿ ಹಾಗೂ ಸರ್ಕಾರದ ಆದೇಶಗಳಿಗಾಗಿ ಅಧಿಕೃತ ವೇದಿಕೆ

ಕೆಎಸ್‌ಆರ್‌ಡಿಪಿಆರ್‌ಡಿಒಇಎ

RTI Act & HInts

ಆರ್‌ಟಿಐ 2005

ಮಾಹಿತಿ ಹಕ್ಕು ಅಧಿನಿಯಮ 2005

ನಾಗರಿಕರಿಗೆ ಸಾರ್ವಜನಿಕ ಮಾಹಿತಿ ಪಡೆಯುವ ಹಕ್ಕನ್ನು ನೀಡುವ ಮೂಲಭೂತ ಕಾಯ್ದೆ. ಅರ್ಜಿ ಶುಲ್ಕ, ಕಾಲಮಿತಿ, ಮೇಲ್ಮನವಿ ಮತ್ತು ಪ್ರಮುಖ ಸೂಚನೆಗಳ ಸಂಕ್ಷಿಪ್ತ ಮಾಹಿತಿ.

ಪ್ರಮುಖ ಅಂಶಗಳು
📅

ಜಾರಿಗೆ

12 ಅಕ್ಟೋಬರ್ 2005 (ಕಾಯ್ದೆ ಸಂಖ್ಯೆ 22/2005)

🇮🇳

ಅರ್ಹತೆ

ಭಾರತದ ಎಲ್ಲಾ ಪ್ರಜೆಗಳಿಗೆ ಅನ್ವಯ (ಸೆಕ್ಷನ್ 3)

🧾

ಅರ್ಜಿ ಶುಲ್ಕ

₹10 (ಬಿಪಿಎಲ್ ಅರ್ಜಿದಾರರಿಗೆ ವಿನಾಯಿತಿ)

🎯

ಉದ್ದೇಶ

ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭ್ರಷ್ಟಾಚಾರ ತಡೆ

ಸೆಕ್ಷನ್ 7 ರನ್ವಯ ಶುಲ್ಕದ ದರಗಳು
ವಿವರಶುಲ್ಕದ ದರ
ಅರ್ಜಿ ಶುಲ್ಕ₹10/-
A4 ಅಥವಾ A3 ಪ್ರತಿ ಪುಟಕ್ಕೆ₹2/- (ಸೆಕ್ಷನ್ 4(4) ವಸ್ತುಗಳಿಗೆ ₹1)
ದೊಡ್ಡ ಗಾತ್ರದ ಪೇಪರ್ನೈಜ ವೆಚ್ಚ
ಸಿಡಿ (CD) / ಎಲೆಕ್ಟ್ರಾನಿಕ್ ಮಾಧ್ಯಮ₹50/-
ದಾಖಲೆ ಪರಿಶೀಲನೆ (ಮೊದಲ 1 ಗಂಟೆ)ಉಚಿತ
ಹೆಚ್ಚುವರಿ ಪರಿಶೀಲನೆ (ಪ್ರತಿ ಅರ್ಧ ಗಂಟೆ)₹10/-
ಮಾದರಿಗಳುನೈಜ ವೆಚ್ಚ
ಪ್ರಕಟಿತ ಮಾಹಿತಿಮಾರಾಟ ಬೆಲೆ
ಕಾಲಮಿತಿ ವಿವರ
ಮಾಹಿತಿಯ ವಿಧಕಾಲಮಿತಿ
ಸಾಮಾನ್ಯ ಮಾಹಿತಿ30 ದಿನಗಳು
ಜೀವ / ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮಾಹಿತಿ48 ಗಂಟೆಗಳು
ಮೂರನೇ ವ್ಯಕ್ತಿ ಮಾಹಿತಿ (ಸೆಕ್ಷನ್ 11)40 ದಿನಗಳು
ಅರ್ಜಿ ವರ್ಗಾವಣೆ (ಸೆಕ್ಷನ್ 6(3))05 ದಿನಗಳು
ಪ್ರಥಮ ಮೇಲ್ಮನವಿ (FAA)30–45 ದಿನಗಳು
ದ್ವಿತೀಯ ಮೇಲ್ಮನವಿ (ಮಾಹಿತಿ ಆಯೋಗಕ್ಕೆ)90 ದಿನಗಳು
⚠️

ಪಿಡಿಒ ಗಮನಕ್ಕೆ: ಬಿಪಿಎಲ್ ಕಾರ್ಡ್‌ದಾರರಿಗೆ 100 ಪುಟಗಳವರೆಗೆ ಉಚಿತವಾಗಿ ಮಾಹಿತಿ ನೀಡಬೇಕು. ಕಾಲಮಿತಿ ಮೀರಿದಲ್ಲಿ ಮಾಹಿತಿ ಉಚಿತ. ಉಚಿತ ಮಾಹಿತಿ ನೀಡಲು ಕಡ್ಡಾಯವಾಗಿ ತಹಶೀಲ್ದಾರರಿಂದ ಪಡೆದ ಆದಾಯ ಪ್ರಮಾಣಪತ್ರ (ಬಿಪಿಎಲ್) ಅಗತ್ಯವಾಗಿದೆ.

ಡಿಜಿಟಲ್ ಲಭ್ಯತೆ
💻

ಪಂಚತಂತ್ರ ಪೋರ್ಟಲ್

ಪಂಚಾಯತ್ ದಾಖಲೆಗಳನ್ನು ಮತ್ತು 4(1)(a) ವಿವರಗಳನ್ನು ಪಂಚತಂತ್ರ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುವುದು ಕಡ್ಡಾಯ.

📄

ಸೆಕ್ಷನ್ 4(1)(a)

ದಾಖಲೆಗಳ ಸೂಚ್ಯಂಕ ಮತ್ತು ಗಣಕೀಕರಣಕ್ಕೆ ಸಂಬಂಧಿಸಿದ ಮಾಹಿತಿ.

ಅಧಿಕೃತ ಜಾಲತಾಣಗಳು & ಮೂಲಗಳು